Friday, April 1, 2011

ಕ್ರಿಕೆಟ್ ಮೇನಿಯ..!





ಚಿಕ್ಕದೊಂದು ಗಾಲಿ ಚೇರು.. ಅದರಲ್ಲಿ ಬೆಚ್ಚಗೆ ಕೂತು ಬಾಯಲ್ಲಿಟ್ಟ ನಿಪ್ಪಲ್ಲನ್ನ ಮತ್ತೆ ಮತ್ತೆ ಚಪ್ಪರಿಸೋ ಎಳಸು ಕಂದ.. ಆ ಪುಟ್ಟ ಕೈಲಿ ಅಮ್ಮನ ಕೈ ಬೆರಳಿಡ್ಕೋಬಹುದು ಅಷ್ಟೆ.. ಆಗ್ಲೇ ಮಗುವಿನ ಸುತ್ತಮುತ್ತ ಬ್ಯಾಟು ಬಾಲು ಇಟ್ಟಾಗಿದೆ.. ಕ್ರೇಜಿ ಪೀಪಲ್ ಅಂದ್ಕೊಂಡು ಕಚೇರಿಯ ಒಳಗೆ ಬಂದೆ..

ನಮ್ಮ ಆಫೀಸಲ್ಲಿ ಅವತ್ತು  ಬರೀ ಬ್ಲ್ಯೂ ಬ್ಲ್ಯೂ ಬ್ಲ್ಯೂ..  ಬ್ಲಡ್ ಬ್ಲ್ಯೂ..! ಕ್ರಿಕೇಟ್ ಹಬ್ಬ.. ಮೇಕಪ್ ಮ್ಯಾನ್ ಕೈಲಿ ಕೇಸರಿ ಬಿಳಿ ಹಸಿರು ಜೊತೆಗೆ ನೀಲಿ ಬಣ್ಣದ ಬ್ರೆಶ್.. ಮೇಕಪ್ ರೂಮಲ್ಲಿ ಜಾಗಾಸಾಕಾಗಿಲ್ಲಾ .. ಕಾನ್ಫರೆನ್ಸ್ ರೂಮಲ್ಲಿ ದೊಡ್ಡ ಸಾಲು.. ಒಬ್ರು ಗಲ್ಲಾ ಮುಂದ್ಮಾಡ್ತಾರೆ, ಇನ್ನೊಬ್ಬರು ಹಣೆ.. ಕಡೆಗೆ ಇಡೀ ಮುಖಾ ಕೊಟ್ಟು ಕೂತವ್ರೂ ಇದ್ದಾರೆ.. ಎಲ್ಲರ ಮುಖದ ಮೇಲೂ ಚಿತ್ರ ವಿಚಿತ್ರ..! ಹ್ಯಾಟು ಬೂಟು ಬಿಟ್ಟು, ಬ್ಯಾಟು ಬಾಲು , ಕಡೆಗೆ ವಲ್ಡ್ ಕಪ್ಪೂ ಮುಖದ ಮೇಲೆ ರಾರಾಜಿಸಿಬಿಟ್ತು.. ಒಟ್ಟಲ್ಲಿ ರಂಗೇರಿದ ವಾತಾವರಣ.. ರಂಗ್ ಭರಾ ದಿಲ್..! ನನಗೊಂದಿಷ್ಟು ಮಾಡಲೇಬೇಕಾದ ಕೆಲಸಾ ಇರ್ಲಿಲ್ಲಾ ಅಂದ್ರೆ ನಾನೂ ಅವರೊಟ್ಟಿಗೆ ಇರ್ತಿದ್ನೇನೋ.. ಬಟ್ ಐ ವಾಸ್ ಹೆಲ್ಪ್ಲೆಸ್..! ಆ ಜೋಶ್ನ ಗದ್ದಲ ಗಡಿ ದಾಟೋ ಮೊದ್ಲು ನನಗೆ ಕೆಲಸಾ ಮುಗಿಸ್ಕೋಬೇಕಿತ್ತು.. ಹಂಗಾಗಿ ಸುತ್ತ ಹತ್ತು ಟಿ ವಿ ಗಳಲ್ಲಿ ಒಂದೇ ಸಮನೆ ಬ್ಯಾಟು ಬೀಸಿ , ಬ್ಯಾಂಡ್ ಬಜಾಯಿಸ್ತಾ ಇದ್ರೂ ಅತ್ತ ಗಮನ ಕೊಡ್ಲಿಲ್ಲಾ.. ಆದ್ರೆ ಮಾತು..! ಅದು ಬೇಡಾ ಅಂದ್ರೂ ಸೀದಾ ತೆಲೆಗೇ ಹೋಗತ್ತೆ.. ಇಂಡಿಯಾ ಪಾಕಿಸ್ತಾನ್ ಮ್ಯಾಚು ಅಂದ್ರೆ ಯಾವ ಯುದ್ಧಕ್ಕಿಂತ ಕಡಿಮೆ ಇಲ್ಲಾ..! ಇಟ್ಸ್ ಅ ರಿಯಲ್ ವಾರ್ ಅಂತ ಯಾರೋ ಒಬ್ಬ ಮೈಕ್ ಹಿಡ್ಕೊಂಡು ಮಾತಾಡ್ತಾ ಇದ್ದಾ.. ನನ್ನ ಯೋಚನೆ ಬೇಡಾ ಅಂದ್ರೂ ಅತ್ತ ಹೋಗೇ ಬಿಟ್ತು..? ಈಸ್ ದೆಟ್ ವಾರ್ ? ನನಗೇ ನಾನೇ ಕೇಳ್ಕೊಂಡೆ..




ಯೆಸ್ ಇಟ್ ಈಸ್..! ಶತ್ರು ರಾಷ್ಟ್ರಗಳ ನಡುವೆ ಅದೇನಾದ್ರೂ ವಾರೆ.. ಆದ್ರೆ ಯಾರಿಗಾದ್ರೂ ಯುದ್ಧವನ್ನ ಎಂಜಾಯ ಮಾಡೋದಕ್ಕಾಗತ್ತಾ..? ಸಿಕ್ಸು ಫೋರ್ಗಳಿಗೆ ಕೇಕೆ ಹಾಕ್ತೀವಿ.. ಎದುರಾಳಿಯ ವಿಕೇಟ್ ತೆಗೆದಾಗ ಕುಣಿದು ಕುಪ್ಪಳಿಸ್ತೀವಿ.. ಒಂದೊಂದು ಬಾಲಿಗೂ ಎಕ್ಸ್ಪ್ರೆಶನ್ನು, ಸರಿದಾಡೋ ಇಂಪ್ರೆಶನ್ನು.. ಜಸ್ಟ್ ಇಮ್ಯಾಜಿನ್ ಅ ರಿಯಲ್ ವಾರ್..! ಪಾಪಿ ಪಾಕಿಗಳು ಗಡಿಯಲ್ಲಿ ನುಸುಳಿ ಬಂದಾಗ ಬದುಕೋ ಆಸೆ ಬಿಟ್ಟು ಬಡಿದಾಡಿದ್ರಲ್ಲಾ ನಮ್ಮ ಕುಲಬಾಂಧವರು.. ಭಾರತ ಮಾತೆಯ ಧೀರ ಪುತ್ರರು ಅವರಿಗೂ ಕ್ರಿಕೇಟ್ ಪ್ಲೇಯರ್ಸ್ಗೂ ಹೋಲ್ಸೋದಕ್ಕಾಗತ್ತಾ..? ಎರಡೂ ಸೇರಿದರೆ ಹುಡುಗಾಟ ಆದೀತು..! ಆದ್ರೂ ಆಟದಲ್ಲಿ ಮತ್ತು ಕಾಟದಲ್ಲಿ ಸಿಮಿಲಾರಿಟಿ ಇದ್ದೇ ಇದೆ..  ಬಾಲು ಎಸೆಯೋವಾಗ ಸ್ಟೇಡಿಯಮ್  ತುಂಬಾ ಜನಾ.. ಜೋಶು ಗಲಾಟೆ.. ಬಾಂಬು ಎಸೆಯೋವಾಗ ದೇಶದ ತುಂಬಾ ಜನ.. ಭಯಾ.. ಆಗ್ಲೂ ಗಲಾಟೆ..

ಮಾಡು ಇಲ್ಲವೇ ಮಡಿ.. ನಿಜಕ್ಕೂ ಆಟಕ್ಕೆ ಮತ್ತು ಯುದ್ಧಕ್ಕೆ ಅದೆಷ್ಟು ಸಂಬಂಧ ಇದೆ ಅಲ್ವಾ..? ಎರಡೂ ಕಡೆಗೂ ವಿಕೇಟ್ ಹೋದ್ರೆ ಪಾಠ..! ಗೆದ್ದುಬಂದ್ರೆ ಬಂಪರ್ ಊಟ..! ಆದ್ರೆ ಆಟದಲ್ಲಿ ಮಾತ್ರ ಸಂತಸಕೂಟ ಮಾಡ್ಬಹುದು.. ಯುದ್ಧದಲ್ಲಿ ಗೆದ್ರೂ ಸೋತ್ಹಾಗೆ.. ಸತ್ತವರ ಸಮಾಧಿಯ ಮೇಲೆ ಸುಖ ನಿದ್ದೆಮಾಡೋ ಮನಸಾದ್ರೂ ಹೇಗೆ ಬರತ್ತೆ ? ಸಿಹಿ ತಿನ್ನೂ ಸ್ಥಿತಿ ಆದ್ರೂ ಎಲ್ಲಿ ಉಳಿಯತ್ತೆ ? ಇಲ್ಲಿ ಸೋಲು ಅನ್ನೋದು ಸಾವಿನ ಮನೆ.. ಗೆಲುವು ಅನ್ನೋದು ಸೂತಕದ ಚಿನ್ಹೆ ..

ಏನೇ ಅಂದ್ರೂ ಗೇಮ್ಲ್ಲಿ ವಾರ್ ಇದೆ.. ಕ್ರಿಕೇಟ್ ಅಂತಲ್ಲಾ, ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಂತಾನೂ ಅಲ್ಲಾ..  ಯಾವ ಆಟತಗೊಂಡ್ರೂ ಪರಸ್ಪರ ಬಡಿದಾಡಲೇಬೇಕು.. ಸೋಲಿನ ವಿರುದ್ಧ ಸೆಣಸಾಡೋದೇ ಆಟ.. ಆ ಕಾದಾಟದಲ್ಲಿ ಮಜಾ ಇದೆ.. ಹದವಾದ ಹುರುಪಿದೆ.. ಗೆಲ್ಲಲೇಬೇಕು ಅನ್ನೋ ಛಲ ಇದೆ.. ಅಪ್ಕೋರ್ಸ್ ಸೋಲಿನ ಭಯ.. ನೋವು ಇದ್ದೇ ಇದೆ..!


ಅಂದ್ಹಾಗೆ ಕ್ರಿಕೇಟ್ ಅಂದ್ರೆ ಇಷ್ಟು ಕ್ರೇಜ್ ಯಾಕೆ..? ಎಲ್ಲಾ ಆಟಗಳೂ ಆಟಗಳೇ ಅಲ್ವಾ..? ನನಗಂತೂ ಇವತ್ತಿಗೂ ಕಬಡ್ಡಿ ವಾಲಿ ಬಾಲ್ ಕೊಖೋಗಳನ್ನೆಲ್ಲಾ ನೋಡಿದಷ್ಟೇ ಖುಶಿ ಕ್ರಿಕೇಟ್ ನೋಡೋವಾಗ್ಲೂ ಆಗತ್ತೆ.. ಇನ್ನು ಆಡೋದ್ರಲ್ಲಿ ಕ್ರಿಕೇಟ್ಗಿಂತ ಚಿನ್ನಿ ದಾಂಡು ಕೂಡಾ ಹೆಚ್ಚಿನ ಖುಶಿ ಕೊಡತ್ತೇನೋ ಅನ್ಸತ್ತೆ.. ನಂಗೆ ಅನ್ಸೋ ಹಾಗೆ ಮತ್ಯಾರಿಗೂ ಅನ್ಸಲ್ವಾ..? ನನ್ನ ಸ್ನೇಹಿತರೆಲ್ಲಾ ನಮ್ಮ ಮಕ್ಕಳನ್ನ ಕ್ರಿಕೇಟ್ ಪ್ಲೇಯರ್ ಮಾಡ್ತೀವಿ.. ಚೆಸ್ ಆಡಿಸ್ತೀವಿ ಅಂತ ಹೇಳಿದ್ದನ್ನ ಕೇಳಿದಿನೇ ಹೊರ್ತು ನನ್ನ ಮಗಾ ಅಥವಾ ಮಗಳು ವಾಲಿಬಾಲ್ ಆಡ್ಬೇಕು ಅಂತ ಒಬ್ಬೇ  ಒಬ್ಬ ಉಲೀಲಿಲ್ಲಾ.. ಯಾಕ್ ಹಾಗ್ ಹೇಳ್ತಾರೆ.? ಇವರಿಗೆಲ್ಲಾ ಮಕ್ಕಳು ಆಡೋದನ್ನ ನೋಡಿ ಖುಶಿಯಾಗಲ್ಲಾ.. ಅದರಲ್ಲಿರೋ ಸಂಪಾಧನೆಯನ್ನ, ಫ್ಯಾನ್ ಪಾಲೋವಿಂಗನ್ನ ನೋಡಿ ಆಸೆಹುಟ್ಟತ್ತೆ ಅಷ್ಟೆ..


ಈ ಕ್ರಿಕೇಟ್ಗಿರೋ ಮಾನ್ಯತೆ ಎಲ್ಲಾ ಆಟಗಳಿಗೂ ಯಾಕಿಲ್ಲಾ..? ಅನ್ನೋ ಪ್ರಶ್ನೆ ನಾಲ್ಕು ಜನಾ ಇರೋ ಕಡೆ ಹಾಕಿದೆ.. ಟೆಸ್ಟ್ ಮ್ಯಾಚಿಂದದ ಹಿಡಿದು ಟಿ ಟ್ವೆಂಟಿ ತನಕ ಬಾಲ್ ಟು ಬಾಲ್ ನೊಡೋ ಅಪ್ಪಟ ಸೋಂಬೇರಿಗಳು ಕ್ರಿಕೇಟ್ಗಿಂತ ಸುಂದರವಾದ ಆಟಾನೇ ಇಲ್ಲಾ ಅಂದ್ಬಿಟ್ರು.. ಇನ್ಕೆಲ ಹುಡುಗೀರು ಸಿನ್ಸಿಯರ್ ಆಗಿ ಕ್ರಿಕೇಟ್ ಪ್ಲೇಯರ್ಸ್ಷ್ಟು ಹ್ಯಾಂಡ್ಸಮ್ ಆಗಿರೋರು ಬೇರೆ ಆಟದಲ್ಲಿ ಸಿಗಲ್ಲಾ ಅಂದ್ರು.. ಇನ್ನೊಂದಿಷ್ಟು ಬುದ್ಧಿವಂತರು ಕ್ರಿಕೇಟ್ಗೆ ಇಂಟರ್ನ್ಯಾಶನಲ್ ಲೇವಲ್ ಅಸೋಸಿಯೇಶನ್ ಇದೆ.. ಕ್ಲಬ್ಬಿದೆ.. ಇಷ್ಟಾಪಡೋರು ವಿಶ್ವದಾದ್ಯಂತ ಇದ್ದಾರೆ ಅಂತ ಅಂದ್ರು.. ಅದು ನಿಜಾನೆ..!

ನಮ್ಮ ಹಳ್ಳಿಯ ಕುಂಟೆಬಿಲ್ಲೆ ಚಿನ್ನಿದಾಂಡಿಗೂ  ಕ್ರಿಕೇಟ್ಗೂ ಹೋಲಿಸೋದಕ್ಕಾಗತ್ತಾ.. ಅಪ್ಕೋರ್ಸ್ ಅದರಷ್ಟು ಪಬ್ಲಿಸಿಟಿ ಇದಕ್ಕೆ ಕೊಟ್ಟು , ದೊಡ್ಡವರೆಲ್ಲಾ ಗ್ರೇಟ್ ಪ್ಲೇ ಅಂದಿದ್ರೆ ಹೋಲಿಸಬಹುದಿತ್ತಪ್ಪಾ.. ಆದ್ರೆ ಹಣ್ಣು ಉದುರಿದಷ್ಟು ಸುಲಭವಾಗಿ ಗಿಡಾ ಹುಟ್ಟಿ ಮರಾ ಆಗಿ ಕಾಯ್ ಬಿಡಲ್ವಲ್ಲಾ ..! ನಾವೇ ಹುಟ್ಸಿ ಬೆಳೆಸೋದಕ್ಕೆ ಸಾಕಷ್ಟು ಪೇಶನ್ಸ್ ಬೇಕು.. ಇಲ್ಲಾ ಯಾರಿಗೋ ಹುಟ್ಟಿ ಬೆಳೆದಿದ್ದನ್ನ ನಾವು ಪ್ರೀತಿಸಬೇಕು.. ನಮ್ಮದನ್ನ ದೇಶ ವಿದೇಶಗಳಿಗೆ ಕೊಂಡೊಯ್ಯೋದಕ್ಕಿಂತ ದೇಶ ವಿದೇಶದಲ್ಲಿರೋದನ್ನ ಪಾಲೋವ್ ಮಾಡಿ ನಮ್ಮದಾಗಿಸಿಕೊಂಡುಬಿಟ್ರೆ ಪಬ್ಲಿಸಿಟಿ ಸಮಸ್ಯೆನೇ ಇಲ್ಲಾ.. ಲಾಭಕ್ಕೂ ಕೊರತೆ ಇಲ್ಲಾ.. ಕ್ರಿಕೇಟ್ ಹಾಕಿಯನ್ನ ಮೀರಿ ಬೆಳೆದಿದ್ದು ಇದಕ್ಕೇ ಅಲ್ವಾ..? ಅವರ್ಯಾರೋ ಆಡಿ ತೋರಿಸಿದ್ದು ಈಗ ನಮ್ಮೆಲ್ಲರ ಮನಸನ್ನ ಆಳೋ ಆಟ.. ನಮ್ಮ ಆಟ.. ಒಂದು ಖುಶಿ ಅಂದ್ರೆ ನಮಗೆ ಎಂಥವರನ್ನೂ ಹಿಮ್ಮೆಟ್ಟೋ ನೈಪುಣ್ಯತೆ ಬಂದಿರೋದು..!

ಇವತ್ತು ಕ್ರಿಕೇಟ್ ಮೇನಿಯಾ ಅನ್ನೋದು ಅದ್ಯಾವ ಮಟ್ಟದಲ್ಲಿದೆ ಅಂದ್ರೆ, ಊಟಾ ನಿದ್ದೆ ಬಿಟ್ಟು ಟಿಕೇಟ್ಗಾಗಿ ಕ್ಯೂ ನಿಲ್ತಾರೆ.. ಅದ್ಯಾರೋ ಆಡಿಲ್ಲಾ ಅಂದ್ರೆ ನಾವು ಪ್ರಾಣ ಬಿಡ್ತೀವಿ ಅಂತಾರೆ..ಅವರೆಲ್ಲರಿಗಿಂತ ಮಜವಾಗಿರೋದು ಕಣ್ಣುಮಂಜಾದ ಅಜ್ಜಂದಿರೂ ಟಿ ವಿಯ ಮುಂದೆ ಕುಂತು ಮ್ಯಾಚ್ ನೊಡೋದು.. ಕ್ಯಾಚ್ ಅಂತ ಬೊಚ್ಚು ಬಾಯಿ ಬಿಚ್ಚಿ ಕೂಗೋದು.. ಮೊನ್ನೆ ಜಯನಗರದ  ಟಿ ವಿ ಶೋ ರೂಮ್ ಒಂದರ ಮುಂದೆ ಲೆಕ್ಕಾತಪ್ಪಿ ಜನಾ ಸೇರಿದ್ರು.. ಅವರ ನಡುವೆ ಒಬ್ಬ ಅಜ್ಜಿ ನಿಂತಿದ್ಲು.. ಈ ಹಿಂದೆ ಹತ್ತಿರದ ಸಿಗ್ನಲ್ಲಲ್ಲಿ ಭಿಕ್ಷೆ ಬೇಡ್ತಾ ಇದ್ದವಳು ಅವಳೇ ಅನ್ಸತ್ತೆ.. ಆಕೆ ಅವತ್ತು ಯಾರತ್ರಾನೂ ಊಟಾ ಮಾಡಿಲ್ಲಾ ಅಂತ ನೋವಲ್ಲಿ ಹೇಳ್ತಾ ಇರ್ಲಿಲ್ಲಾ, ಕೈ ಒಡ್ಡಿ ಬೇಡ್ಕೋತಾ ಇರ್ಲಿಲ್ಲಾ.. ಆಕೆಗೆ ಹಸಿವಿನ ಪರಿವೂ ಇದ್ದಂತಿರ್ಲಿಲ್ಲಾ.. ಬಾಲಿನ ವೇಗದ ಎದೆಬಡಿತಕ್ಕೆ ತಕ್ಕಂತಾ ಸುಪ್ಪರ್ ಎಕ್ಸ್ಪ್ರೆಶನ್ನು.. ಜಸ್ಟ್ ಆಯ್ ಕಾಂಟ್ ಬಿಲೀವ್.. ನನ್ನ ಕಣ್ಣನ್ನ ನನಗೇ ನಂಬೋದಕ್ಕಾಗ್ಲಿಲ್ಲಾ.. ಇವರ ಖುಶಿಗೆ ಮೆರಗು ಕೊಡೋ ಕಿರೀಟವನ್ನ ಬ್ಲೂ ಬಾಯ್ಸ್ ತಗೊಂಬರ್ತಾರೆ ಅಲ್ವಾ..?
 

No comments:

Post a Comment