Saturday, September 24, 2011

ಪ್ರೀತಿಗ್ಯಾಕೆ ಇಂಥಾ ಪರೀಕ್ಷೆ..?

ನಿನ್ನ ಪ್ರೇಮದ ಪರಿಯ 
 ನಾನರಿಯೆ ಕನಕಾಂಗಿ
 ನಿನ್ನೊಳಿದೆ ನನ್ನ ಮನಸು
ಅವಳ ಪ್ರೇಮದ ಪರಿ ಅವನಿಗೆ ನಿಜವಾಗಿಯೂ ಅರ್ಥವಾಗಿಲ್ವಾ..? ಅಥವಾ ಅವಳೊಳಗಿನ ಮನಸನ್ನ ಹೊರಗೆ ತರೋದಕ್ಕೇ ಸಾಧ್ಯವಾಗ್ಲಿಲ್ವಾ..? ಒಮ್ಮೆ ಅನ್ನಿಸಿಬಿಟ್ಟಿತ್ತು ಪ್ರೀತಿ ಅಂದ್ರೆ ಅದು.. ಅಲ್ಲಿ ಅದರಹೊರತಾಗಿ ಎಲ್ಲವೂ ಗೌಣ.. ಅದೊಂದು ಜೀವ ಜೊತೆಗಿಲ್ಲದಿದ್ದರೆ ಬೆಳಗಿನಲಿ ಚಂದವಿಲ್ಲ, ನೋಟದಲ್ಲಿ ಅಂದವಿಲ್ಲ .. ತಿಂಡಿ ತೀರ್ಥದಲ್ಲಿ ಧ್ಯಾನವಿಲ್ಲ.. ಕತ್ತಲಲಿ ಕರೆದಂತಾಗತ್ತೆ.. ಮೌನದಲಿ ನೆರಳು ಸರಿದಾಡಿದಂತಾಗತ್ತೆ.. ಅಲ್ಲಿಗೆ ಅದು ಎರಡು ಜೀವವಲ್ಲವೇ ಅಲ್ಲ..



ಅವಳೆಲ್ಲೋ ಹುಟ್ಟಿದವಳು ಇವನೆಲ್ಲೋ ಬೆಳೆದವನು.. ಒಂದು ತಟ್ಟೆಯಲಿ ತಿಂದವರಲ್ಲಾ, ಒಂದೇ ಅಂಗಳದಲಿ ಆಡಿದವರಲ್ಲಾ.. ಇಬ್ಬರ ಕುಟುಂಬದ ರೀತಿ ನೀತಿಗಳೇ ಬೇರೆ.. ಸಂಸ್ಕಾರ ಬೇರೆ. ಸಂಬಂಧಗಳು ಬೇರೆ.. ಕಡೆಗೆ ನಡೆದ ದಾರಿಯೂ ಬೇರೆ.. ಅದ್ಯಾವ ತಿರುವಿನಲ್ಲಿ ಅವನು ಅವಳನ್ನ ನೋಡಿದ್ನೋ ಗೊತ್ತಿಲ್ಲ, ಕಣ್ಣುಗಳು ಕಲೆತಿವೆ.. ಮನಸುಗಳು ಬೆರೆತಿವೆ.. ಕಾಣದ ದೇವರು ಹರಸದಿದ್ದರೆ ಕಂಡಕ್ಷಣದಲ್ಲಿ ಎರಡು ಜೀವಗಳು ಅಂಥದ್ದೊಂದು ಪ್ರೇಮದ ಸೆಲೆಯಲ್ಲಿ ಸಿಲುಕೋದಕ್ಕೆ ಸಾಧ್ಯ ಇದ್ಯಾ..? ಅವರಿಬ್ಬರೂ ಮಾತೇ ಆಡದೆ ಮನಸುಕೊಟ್ಟಿದ್ರು.. ಅಲ್ಲಿ ಜಾತಿಯಿಲ್ಲ.. ಜಾತಕವಿಲ್ಲ ಕಡೆಗೆ ಹೆಸರೂ ಗೊತ್ತಿಲ್ಲ.. ಹೃದಯಬಡಿತ ಅಷ್ಟೇ ಕೇಳಿಸಿದ್ದು.. ಮನದ ಮಿಡಿತವಷ್ಟೇ ಮೊಳಗಿದ್ದು..


ಅವನು ಹಾಸನದವನು ಅವಳು ಅಲ್ಲೇ ಹತ್ತಿರದ ಹಳ್ಳಿಯವಳು.. ಅವಳು ಓದಿದ್ದು ಕಡಿಮೆ , ಇವನು ಡಿಪ್ಲೋಮಾ ಮಾಡೋದಕ್ಕೆ ಹೊರಟಿದ್ದ.. ಓದು ಮುಗಿಸಿ ಬರೋವರೆಗೂ ಅವನ ಮನಸಲ್ಲಿದ್ದವಳು ಅವಳೊಬ್ಬಳೇ.. ಧೈವೇಚ್ಛೆ ನೋಡಿ, ಆ ಮನೆಯಲ್ಲಿದ್ದ ಹುಡುಗಿಗೆ ಯಾವತ್ತೋ ಮದುವೆ ಆಗ್ಬಿಡ್ತಿತ್ತು, ಆದ್ರೆ ಗುರುಬಲ ಬಂದಿದ್ದು ಅವನು ಬಂದಮೇಲೆ.. ಆಗ ಇಬ್ಬರೂ ಮತ್ತೆ ಸಿಕ್ಕಿದ್ದಾರೆ.. ಪ್ರೀತಿಯ ಸಂದೇಶ ಮಾತಲ್ಲಿ ಹೊರಬಂದಿದ್ದು ಆಗ.. ಇಬ್ಬರಿಗೂ ಇಷ್ಟ.. ಆದ್ರೆ ಕಷ್ಟ.. ಯಾಕಂದ್ರೆ ಜಾತಿ ಬೇರೆ.. ಮನೆಯಲ್ಲಿ ಇವರಿಬ್ಬರ ಸಂಬಂಧವನ್ನ ಜೋಡಿಸೋ ಚಾನ್ಸೇ ಇಲ್ಲ.. ಹರಸಿದರೆ ಅದೇ ಹೆಚ್ಚು.. ಆದ್ರೂ ಪ್ರೀತಿ ಕುರುಡು ನೋಡಿ ಪರಸ್ಪರ ಅದೆಂಥಾ ಟೈಮಲ್ಲೂ ಜೊತೆ ಯಾಗೋ ಶಪಥ ಮಾಡೇ ಬಿಟ್ರು.. ನಂತ್ರಾ ಎಲ್ಲರ ವಿರೋಧದಲ್ಲೂ ಮದುವೆ ಫಿಕ್ಸ್ ಆಯ್ತು.. ಕಡೆಗೆ ಹೆತ್ತವರು ಭಾರವಾದ ಹೃದಯದಲ್ಲೇ ಆಶಿರ್ವಾದ ಮಾಡಿದ್ರು.. ಆದ್ರೆ ಮದುವೆ ಊರ ಅಂಗಳದ ಚಪ್ಪರದಲ್ಲಿ ಅದ್ಧೂರಿಯಾಗಂತೂ ನಡೆದಿಲ್ಲ.. ಧರ್ಮಸ್ಥಳದ ಮಂಜುನಾಥ ಈ ಮದುವೆಗೆ ಸಾಕ್ಷಿಯಾದ.. ಹರಸಿ ಹೃದಯದಲ್ಲಿ ನೆಲೆನಿಂತ ಹರನಾದ.. !


 ಆ ಭಗವಂತನ ಆಶೀರ್ವಾದದೊಂದಿದೆ ಬದುಕನಾರಂಭಿಸಿದ ಆ ಜೋಡಿ ನೆಲೆ ಕಂಡುಕೊಂಡಿದ್ದು ಬೆಂಗಳೂರಿನಲ್ಲಿ.. ಡಿಪ್ಲೊಮಾ ಮಾಡ್ಕೊಂಡಿದ್ದ ಹುಡುಗನಿಗೊಂದು ಕೆಲಸಾ ಸಿಕ್ತು.. ಬರೋ ಕಾಸು ಇವರಿಬ್ಬರ ಬದುಕಿಗೆ ಸಾಕಾಗಿತ್ತು..ಅಷ್ಟಕ್ಕೂ ಹೊತ್ತು ಅನ್ನವಿಲ್ಲದೆ ಬರಿ ತುತ್ತು ತಿಂದು ಬದುಕಿದ ದಿನಗಳನ್ನೂ ಕಂಡ ಜೀವ ಅದು.. ಬಡತನ ದುಃಖವಾಗಿರ್ಲಿಲ್ಲ.. ಬದುಕಿನ ಕತ್ತಲಲ್ಲಿ ಬಾಂಧವ್ಯದ ಹಣತೆಹಚ್ಚಿ , ತಂಗಾಳಿಯ ಹೊದಿಕೆಯಲ್ಲಿ , ಶೃಂಗಾರದ ಕಾವ್ಯ ಬರೆದು ಬೆಚ್ಚಗಾದ ಜೀವಗಳಿಗೆ ಕಷ್ಟ ಕಣ್ಣೀರಾಗ್ಲಿಲ್ಲ.. ದಿನಗಳು ಹಾಗೇ ಕಳೆದಿದ್ವು.. ಅವಳ ಕಣ್ಣಾಲೆಯಲಿ ಮೂಡಿದ ಚಿತ್ತಾರಕ್ಕೆ ಇವನು ಬಣ್ಣ ತುಂಬ್ತಿದ್ದ, ಇವನ ತುಟಿಯಂಚಿನ ಮಾತಿಗೆ ಇವಳು ಶಬ್ದವಾಗ್ತಾ ಇದ್ಲು.. ನಡುವೆ ಮತ್ತೊಂದು ಸಂಭ್ರಮ ..


ಆಕೆ ಹೆರಿಗೆ ಕೋಣೆಯಲ್ಲಿ ಅಮ್ಮಾ ಅಂತ ನರಳಾಡ್ತಾ ಇದ್ರೆ ಇವನು ಒದ್ದಾಡ್ತಾ ಇದ್ದ.. ಆಕೆಯ ಬೇನೆ ಅವನ ನೋವಾಗಿತ್ತು.. ಕಟ್ಟಿದ್ದ ಕೈ ಮುಷ್ಠಿ ಸಡಿಲಾಗೋ ಹೊತ್ತಿಗೆ ಕಂದನ ಕೂಗು.. ಮನೋಜ ಹುಟ್ಟಿದ್ದ.. ಆ ಮಗುವನ್ನ ಎತ್ತಿ ಮುದ್ದಾಡೋ ಮೊದಲು  ಬೊಗಸೆಯಲ್ಲಿ ಅವಳ ಮುಖವನ್ನಿಟ್ಟು ಹಣೆಗೊಂದು ಹೂಮುತ್ತನಿಟ್ಟವನ ಕಣ್ಣಲ್ಲಿ ಧನ್ಯತೆಯ ಭಾವವಿತ್ತು..! ಆಕೆ ಮೆಲ್ಲಗೆ ಹೊರಳಿದಾಗ ಇವನ ಕೈಯ್ಯಲ್ಲಿ ಮಗು.. ಅವನ ಕೈಯ್ಯಲ್ಲಿ ಬೆಚ್ಚಗೆ ಮಲಗಿದ್ದ ಕಂದನ್ನ ಕಂಡಾಗ ಆಕೆಯ ಕಣ್ಣಲ್ಲಿ ಸಂತಸದ ಕಂಬನಿ.. ಹೀಗೆ ಶುರುವಾಗಿತ್ತು ಪ್ರೇಮಿಗಳ ಬದುಕಿನ ಮತ್ತೊಂದು ಯಾನ..!


ಮಗುವಿನ ಆಟ ನೋಟ ತುಂಟಾಟದಲ್ಲಿ ಮೂರು ವರ್ಷಕಳೆದಿದ್ದೇ ಗೊತ್ತಾಗಿಲ್ಲ.. ಆ ನಂತ್ರ ಶುರುವಾಗೋದು ದೊಡ್ಡ ದೊಡ್ಡ ಜವಾಬ್ದಾರಿಗಳ ಸಾಲು.. ಅವನ ಸಂಬಳದಲ್ಲಿ ಎಲ್ಲವೂ ಸರಾಗವಾಗಿ ಮುಗಿಯಲ್ಲ ಅಂತ ಅನ್ನಿಸಿ ಆಕೆ ಮೊಟ್ಟಮೊದಲಬಾರಿ ಹೊರಗೆ ದುಡಿಯೋ ಯೋಚನೆ ಮಾಡಿದ್ಲು.. ಅವನೂ ಅದಕ್ಕೆ ಒಪ್ಪಿದ್ದ.. ದುಡಿಮೆ ಪ್ರೀತಿಗೆ ಕಡಿವಾಣಹಾಕಲಿಲ್ಲ.. ಜೀವನದ ಜವಾಬ್ದಾರಿ ಸಂಬಂಧದ ಸಮಯವನ್ನ ಸಾಯಿಸಲಿಲ್ಲ.. ಬೆಳದಿಂಗಳಲ್ಲಿ ಇಬ್ಬರೂ ಕೈ ಜೋಡಿಸಿ ಕುಳಿತಿದ್ರೆ ಕಣ್ಣಲ್ಲಿ ನಕ್ಷತ್ರ ಕಾಣ್ತಾ ಇತ್ತು.. ನಡೆಯಲ್ಲಿ ಆನಂದ ಇರ್ತಿತ್ತು.. ನಗು ನಗು.. ಅದೊಂದು ಸುಂದರ ಸಂಬಂಧಕ್ಕೆ ಸಾವಿರ ವರ್ಷ ಆಯಸ್ಸಿದ್ರೂ ಇಷ್ಟೇ ಮಧುರವಾಗಿರ್ತಿತ್ತೇನೋ.. ಕಾಣದ ಕಣ್ಣುಗಳೂ ಕಥೆ ಹೇಳ್ತಿದ್ವೇನೋ.. ನಡುಗೋ ಕೈಗಳು ಹಿತವೆನಿಸುವವರೆಗೂ ಜೊತೆಯಾಗುವಂತ ಪ್ರೀತಿ ಅವರದ್ದು.. ಅಂಥ ಪ್ರಿತಿಗೆ ಆಯಸ್ಸಿಲ್ಲ..!


ಅವಳಿಗೆ ಅದೇನು ಕಾಯಿಲೆ ಇತ್ತು ಅನ್ನೋದು ನನಗೂ ಗೊತ್ತಾಗ್ಲಿಲ್ಲ.. ಒಟ್ಟಲ್ಲಿ ಗಂಟಲಲ್ಲಿ ಎದ್ದ ಚಿಕ್ಕದೊಂದು ಗಂಟು ಬದುಕಿನ ನಂಟನ್ನೇ ಕಡಿದುಬಿಡೋ ಮಟ್ಟಕ್ಕೆ ಹೋಯ್ತು.. ಆ ಗಂಟಿಗೆ ಅಂಟಿಕೊಂಡು ಬಂದ ಗಂಟಲ ನೋವು ಮನೆಮದ್ದಿಗೆ ವಾಸಿಯಾಯ್ತು..ಆದ್ರೆ ಗಂಟು ಹೋಗ್ಲಿಲ್ಲಾ.. ಮತ್ತೆ ಅದು ಕಾಡಿದಾಗ ಮದ್ದು , ಬಾಡಿದಾಗ ಮೌನ.. ಅವಳು ಆ ಕಷ್ಟವನ್ನ ಇವನಿಗೆ ಹೇಳಲೇ ಇಲ್ಲ.. ಆದ್ರೆ ಇವನಿಗೆ ಆಕೆ ಕೆಲವಷ್ಟನ್ನ ಹೇಳಬೇಕಾಗಿರ್ಲಿಲ್ಲ.. ಹೆಂಡತಿಯನ್ನ ಆಸ್ಪತ್ರೆಗೆ ಕರ್ಕೊಂಡ್ಹೋಗಿದ್ದ.. ಅವರು ಆ ದಂಪತಿಯ ಬದುಕಿಗೆ ಬಹುದೊಡ್ಡ ಶಾಕ್ ಕೊಟ್ಟಿದ್ರು.. ಅದು ಗಂಟಲ್ಲಾ ಗಡ್ಡೆ.. ತಕ್ಷಣ ಆಪರೇಶನ್ ಆಗ್ಬೇಕು..
ಆಪರೇಶನ್ ಆಗ್ತಿತ್ತು ದುಡ್ಡೊಂದಿದ್ರೆ.. ಆದ್ರೆ ಇವರತ್ರಾ ಇರೋ ಚಿಕ್ಕಸೇವಿಂಗಲ್ಲಿ ಕೆಲಸಾ ಆಗಲ್ಲಾ.. ಆಗ್ಲೇ ಹೆತ್ತವರಿಗೆ ಸಂಬಂಧಿಗಳಿಗೆ ವಿಶಯ ತಿಳಿಸಿ ಸಹಾಯ ಕೇಳಿದ್ರೆ ಆ ರುಣವನ್ನ ಕೈಲಾದ ಮಟ್ಟಿಗೆ ತೀರಿಸೋದಕ್ಕೆ ಅವಳು ಬದುಕಿರ್ತಾ ಇದ್ಲು..ಆದ್ರೆ ಆಕೆಗೆ ಸ್ವಾಭಿಮಾನ,, ಯಾರ ಹತ್ರಾನೋ ಕೈಚಾಚೋದಕ್ಕೆ ಅವಳೊಪ್ಪಲಿಲ್ಲ.. ಅವನು ಎಲ್ಲಕಡೆ ಹಣಾ ಹೊಂದಿಸೋ ಪ್ರಯತ್ನದಲ್ಲುಳಿದ.. ಆ ಟೈಮಲ್ಲೇ ಇವಳ ಗಂಟಲಿನ ಗಡ್ಡೆ ಕಣ್ಣಿನ ದೃಷ್ಟಿಯನ್ನೂ ಕಿತ್ಕೊಂಡಿತ್ತು.. ಆದ್ರೂ ಆಪರೇಶನ್ನಿನ ಹಣ ಸೇರಿರ್ಲಿಲ್ಲ.. ಹಗಲೂ ರಾತ್ರಿ ಕಷ್ಟ ಪಡೋ ಗಂಡನ್ನ ನೋಡಿ ಆಕೆ ಅಂತಿಮ ನಿರ್ಧಾರಕ್ಕೆ ಬಂದಿದ್ಲು.. ತನ್ನ ಆಪರೇಶನ್ನಿಗೆ ಕರ್ಚುಮಾಡೋ ಹಣವನ್ನ   ಉಳಿಸಿದ್ರೆ ಮಗುವಿನ ಭವಿಶ್ಯಕ್ಕಾಗತ್ತೆ ಅಂತ ಯೋಚಿಸಿದ್ಲು.. ತನ್ನವನ ಪರದಾಟಕ್ಕೆ ತೆರೆ ಎಳೆದುಬಿಡ್ತೀನಿ ಅಂದ್ಕೊಂಡು ಅವತ್ತೊಂದು ದಿನ ಸಾವನ್ನ ಕೈಬೀಸಿ ಕರೆದುಬಿಟ್ಲು..


ಮನೆಗೆ ಬಂದವನಿಗೆ  ಭರಿಸಲಾಗದ ಆಘಾತ.. ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸ್ತಾ ಇದ್ದವಳ ಹೆಣದ ಮುಂದೆ ಕೂತು  ಕೊಡಗಟ್ಟಲೆ ಕಣ್ಣೀರಾಕಿದ್ರೂ ದುಃಖ ಹೋಗ್ಲಿಲ್ಲ.. ಪಕ್ಕದಲ್ಲಿದ್ ಮಗನ ನೋಟ್ ಬುಕ್ ತಗೊಂಡು ಬರೆದಿದ್ದು ಒಂದೇ ವಾಕ್ಯ.. ನೀನು ಮೊದಲು ಹೋಗ್ಬಿಟ್ಯಾ..? ನಾನೂ ಬರ್ತೀನಿ.. ಅಂತ ಅಲ್ಲಿಂದ ಎದ್ದವನಿಗೆ ಸ್ಕೂಲಿಗೆ ಹೋಗಿದ್ದ ಮಗ ನೆನಪಾಗ್ಲಿಲ್ಲ.. ಹೆಂಡತಿಯ ಜತೆಗೆ ಅವನಿಗಿದ್ದ ಮನಸಿನ ಸಂಬಂಧವನ್ನ ಮಗನ ಮೇಲಿನ ಪ್ರೀತಿ ಗೆದ್ದಿರ್ಲೇ ಇಲ್ಲ.. ಅವಳಿಗಿಂತ ಜಾಸ್ತಿ ಅವನ ಬದುಕಲ್ಲಿ ಮತ್ತೇನೋ ಇದೆ ಅಂತ ಅನ್ನಿಸಲೇ ಇಲ್ಲ.. ಅವಳ ನೆನಪಲ್ಲೇ ಕತ್ತಿನ ಕುಣಿಕೆಯನ್ನ ಬಿಚ್ಚಿ ಹಾಸಿಗೆಯ ಮೇಲೆ ಮಡದಿಯನ್ನ ಮಲಗಿಸಿದವನು ಅದೇ ಹಗ್ಗದಲ್ಲಿ ಮತ್ತೊಂದು ಕುಣಿಕೆ ಹಾಕಿಬಿಟ್ಟ.. ಅದರೊಳಗೆ ತಲೆ ಇಟ್ಟವನಿಗೆ ಮತ್ತೆ ಅವಳನ್ನ ಸೇರುವ ತವಕವೊಂದೇ ಇತ್ತು.. ಪ್ರೇಮಿಗಳು ಸಾವಿನ ನಂತರದ ಗೊತ್ತಿಲ್ಲದ ಬದುಕಲ್ಲಿ ಮತ್ತೆ ಒಂದಾಗಲು ಹೊರಟುಬಿಟ್ಟಿದ್ವು.. ಇಬ್ಬರು ಬದುಕಿದ್ದು ಒಂದೇ ಬದುಕನ್ನ ಇನ್ನು ಸಾವು ಬೇರೆ ಬೇರೆ ಬರೋದಕ್ಕೆ ಸಾಧ್ಯ ಇದ್ಯಾ..?  ಆ ಹೆಣವನ್ನ ನೋಡಿ ಅತ್ತವಳು ನಾನು.. ಅವರ ಪ್ರೀತಿ ಅದರ ಅಸಹಾಯಕ ರೀತಿ ನನ್ನನ್ನ ಕಾಡಿಬಿಟ್ತು..
ಈ ಪವಿತ್ರ ಪ್ರೇಮದ ಕುಡಿ ಬಾಡದಿರ್ಲಿ.. ಮನೋಜ ಮನೋಜ್ಞವಾಗಿ ಬೆಳೆಯಲಿ.

7 comments:

  1. I am speechless..It literally made me cry...

    ReplyDelete
  2. even i felt like that ..
    when I saw the death note and the body.

    ReplyDelete
  3. ಸಿಂಚನ

    ಅದ್ಭುತ ಬರಹ, ಬದುಕಿನ ವೈರುದ್ಯತೆ ನೋಡಿ, ಸುಖ ತುಂಬಾನೇ ಬಂತು ಅಂದ್ರೆ ಒಂದು ಗ್ಯಾರಂಟೀ,
    ಜೊತೆಗೆ ದು:ಖ ನೂ ತುಂಬಿಕೊಂಡೆ ಬರತ್ತೆ. ಅದೊಂದ ತರ ಫ್ರೀ ಗಿಫ್ಟ್ ಇದ್ದ ಹಾಗೆ, ಒಂದಕ್ಕೊಂದು ಬಿಟ್ಟು ಇರೋಕೆ ಆಗಲ್ಲ ಆಲ್ವಾ.
    ನಿಮ್ಮ ಬರಹದ ಸತ್ವ ಇಷ್ಟ ಆಯ್ತು,
    ''ಬಡತನ ದುಃಖವಾಗಿರ್ಲಿಲ್ಲ.. ಬದುಕಿನ ಕತ್ತಲಲ್ಲಿ ಬಾಂಧವ್ಯದ ಹಣತೆಹಚ್ಚಿ , ತಂಗಾಳಿಯ ಹೊದಿಕೆಯಲ್ಲಿ , ಶೃಂಗಾರದ ಕಾವ್ಯ ಬರೆದು ಬೆಚ್ಚಗಾದ ಜೀವಗಳಿಗೆ ಕಷ್ಟ ಕಣ್ಣೀರಾಗ್ಲಿಲ್ಲ.. ದಿನಗಳು ಹಾಗೇ ಕಳೆದಿದ್ವು.. ಅವಳ ಕಣ್ಣಾಲೆಯಲಿ ಮೂಡಿದ ಚಿತ್ತಾರಕ್ಕೆ ಇವನು ಬಣ್ಣ ತುಂಬ್ತಿದ್ದ, ಇವನ ತುಟಿಯಂಚಿನ ಮಾತಿಗೆ ಇವಳು ಶಬ್ದವಾಗ್ತಾ ಇದ್ಲು.. ನಡುವೆ ಮತ್ತೊಂದು ಸಂಭ್ರಮ ''

    ಇಂಥಹ ವಾಕ್ಯಗಳನ್ನ ಬರೆಯೋ ಮೊದಲು ಆ ಭಾವನೆಗಳು ಇರಬೇಕು. ಇನ್ನೊಬ್ಬರ ನೋವಿಗೆ ಮರುಗುವ ಮನಸ್ಸು ನಮ್ಮದಗ್ದೆ ಇದ್ರೆ ಭಾವೆಗಳು ಪೆನ್ನಿನ ಜೊತೆ ಎಂದೂ ಬರೋದೆ ಇಲ್ಲ.
    '' ಅವಳ ನೆನಪಲ್ಲೇ ಕತ್ತಿನ ಕುಣಿಕೆಯನ್ನ ಬಿಚ್ಚಿ ಹಾಸಿಗೆಯ ಮೇಲೆ ಮಡದಿಯನ್ನ ಮಲಗಿಸಿದವನು ಅದೇ ಹಗ್ಗದಲ್ಲಿ ಮತ್ತೊಂದು ಕುಣಿಕೆ ಹಾಕಿಬಿಟ್ಟ.. ಅದರೊಳಗೆ ತಲೆ ಇಟ್ಟವನಿಗೆ ಮತ್ತೆ ಅವಳನ್ನ ಸೇರುವ ತವಕವೊಂದೇ ಇತ್ತು..''
    ಅದು ಅವನ ಶ್ರೇಷ್ಠ ಪ್ರೇಮದ ಪರಿಚಯ, ಆದರೆ ಬದುಕಿನ ಸತ್ಯ ಏನು ಗೊತ್ತ, ''ಸ್ವಾರ್ಥ'', ನನಗೆ ಅವನ ಪ್ರೇಮದ ಬಗ್ಗೆ ಇಷ್ಟ ಆಗಲಿಲ್ಲ, ಯಾಕಂದ್ರೆ ಅದು ಸ್ವಾರ್ಥದಿಂದ ಕೂಡಿತ್ತು. ಅವನಿಗೆ ಅವಳದೇ ಪ್ರೇಮದ ಕುಡಿ ಮನೋಜನ ನೆನಪು ಬರಲೇ ಇಲ್ಲ.
    ಅವನು ತನ್ನ ಪ್ರೇಮವನ್ನ ಅರ್ಥ ಮಾಡಿಕೊಳ್ಳಲೇ ಇಲ್ಲ. ಏನೂ ಅರಿಯದ ಮಗು ಅನಾಥ ಆಯಿತು.

    ಮಗುವನ್ನ ಭೂಮಿಗೆ ತಂದ ಮೇಲೆ ಅದನ್ನ ಅನಾಥ ಮಾಡುವ ಹಕ್ಕು ನಮಗಿದೆಯ? ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಇದ್ರೆ ಚೆನ್ನ ಅಂತ ಅನಿಸೊಲ್ವ?

    ಒಟ್ಟಿನಲ್ಲಿ ಇವತ್ತು ಆಫೀಸ್ ಬಂದ ಮೇಲೆ ನಿಮ್ಮ ಬರಹ ಓದಿದೆ, ತುಂಬಾ ವಿಚಾರಗಳು ಸುಳಿದವು.
    ಉತ್ತಮ ಬರಹಕ್ಕೆ ಅಭಿನಂದನೆಗಳು,
    ಇನ್ನು ಹೊಸ ಬರಹ ಬರೆದಾಗ ನನಗೆ ಒಂದು ಮೇಲ್ ಹಾಕಿ,
    ನಂದು ಆಫೀಸ್ ಮೇಲ್
    murthyhegde@gmail.com

    ReplyDelete
  4. Nice writing Sahana..adre story maatra bhayaanaka! I really salute their love..

    ReplyDelete
  5. ದನ್ಯವಾದ ಗುರು ಅವರೆ, ಖಂಡಿತ ಕಳಿಸ್ತೀನಿ..
    ಅಂದ್ಹಾಗೆ ನೀವು ಕೆಲ ಪ್ರಶ್ನೆಗಳು ಪ್ರಶ್ನೆಯಾಗಿಯೇ ಇದ್ದರೆ ಚೆನ್ನ ಅಲ್ವಾ..? ಅಂತ ಕೇಳಿದ್ರಿ, ಆದ್ರೆ ಉತ್ತರ ಹುಡುಕಿಕೊಳ್ಳದಿದ್ದರೆ ಪ್ರಶ್ನೆ ಮತ್ತೆ ಮತ್ತೆ ಮನಸಿಗೆ ಬರತ್ತೆ ಅಂತ ನಿಮಗನ್ಸಲ್ವಾ..?
    ಅಂದ್ಹಾಗೆ , ನನ್ನ ಫ್ರೆಂಡ್ ಒಬ್ಬಳು ಈ ಬರಹಕ್ಕೆ ಫೇಸ್ ಬುಕ್ಕಲ್ಲಿ ಹೀಗೆ ಕಾಮೆಂಟ್ ಮಾಡಿದ್ಲು, " ಅವನು ಮಾಡಿದ್ದು ನಿನಗೆ ಪ್ರೀತಿ ಅನ್ನಿಸಿತಾ, ನನಗೆ ಸ್ವಾರ್ಥ ಅನ್ನಿಸ್ತು. ಮನೋಜ ಅನ್ನೋ ಗುಬ್ಬಿ ಮರಿ ಏನ್ ಮಾಡಿತ್ತು. ಅದೂ ಅವಳದ್ದೇ ಜೀವ ಅಲ್ವಾ. ಅವಳದ್ದೇ ಕನಸು, ಅವರದ್ದೇ ಪ್ರೀತಿಯ ಫಲ ಅಲ್ವಾ. ಅವಳಿಲ್ಲದೆ ಅವನಿಗೆ ಇರಲಾಗಲಿಲ್ಲ ಅಂದ್ರೆ ಅವರಿಬ್ಬರೂ ಇಲ್ಲದೆ ಆ ಕೂಸು ಹೇಗೆ ಇರ್ಬೇಕು. ಸಿಂಚನಾ ಪ್ರೀತಿ ಒಂದು ಶಕ್ತಿ ಆಗ್ಬೇಕು, ವೀಕ್ನೆಸ್ ಅಲ್ಲ."

    ಯೆಸ್ ಅವಳು ಹೇಳಿದ ಹಾಗೆ ಪ್ರೀತಿ ಸ್ಟ್ರೆಂತ್ ಆಗ್ಬೇಕು ನಿಜ..ಆದ್ರೆ ಅವಳಿಲ್ಲದೆ ಬದುಕಿಲ್ಲ ಅನ್ನೋ ವೀಕ್ನೆಸ್ ಇದೆ ಅಂದ ಮಾತ್ರಕ್ಕೆ ಪ್ರೀತಿನೇ ಅರ್ಥಕಳ್ಕೊಳ್ಳತ್ತಾ..? ನಾವು ಪ್ರೀತಿಸೋರ ವೀಕ್ನೆಸ್ಗಳ ಜೊತೆಗೆ ಇಷ್ಟಪಡೋ ನಾವು, ಒಂದು ವೀಕ್ನೆಸ್ನಿಂದ ಪ್ರೀತಿಯನ್ನ ಪ್ರೀತಿ ಅನ್ನದೇ ಇರೋದಕ್ಕಾಗತ್ತಾ..? ಹಾಗೆ ಯೋಚಿಸಿ ನಾನು ಅವರಿಗೆ ಪ್ರತಿಕ್ರಿಯಿಸಿದ್ದು ಹೀಗೆ,

    " ಮದು ನನಗೆ ಅದು ಪ್ರೀತಿ ಅಂತಾನೇ ಅನ್ನಿಸಿದೆ.. ಟೀನೇಜಲ್ಲಿ ಹುಟ್ಟೋ ಪ್ರೀತಿಗೆ ಜೀವದ ಬೆಲೆ ಗೊತ್ತಿರಲ್ಲ.. ಒಬ್ಬರಿಗಾಗಿ ಒಬ್ಬರು ಸಾಯೋದಿದೆ.. ಆದ್ರೆ ಜೊತೆಗೆ ವಷರ್ಾನುಗಟ್ಟಲೆ ಬದುಕಿದಮೇಲೂ ನನಗೆ ನೀನು ನಿನಗೆ ನಾನು ಅನ್ನೋ ಭಾವ ಉಳಿಯೋದು ಕಷ್ಟ.. ಎಷ್ಟು ಪ್ರೀತಿಗಳು ಮದುವೆಯ ನಂತರ ಜೀವಂತವಾಗಿರತ್ವೆ ಹೇಳಿ..?

    ಈ ಸ್ಟೋರಿ ಬರೆಯೋವಾಗ ನಾನೂ ಆ ಮಗುವಿನ ಬಗ್ಗೆ ಸಾಕಷ್ಟು ಯೋಚಿಸಿದೆ.. ಅಲ್ಲಿ ಗಂಡನಿಗೇನಾದ್ರೂ ಆಗಿ ಸುಸೈಡ್ ಮಾಡ್ಕೊಂಡಿದ್ರೆ ಹೆಂಡತಿ ಸಾಯ್ತಿರ್ಲಿಲ್ಲ..ಮಗುವಿನ ಮುಖ ನೋಡ್ಕೊಂಡು ಬದುಕ್ತಾ ಇದ್ಲು.. ಹಾಗಂತ ಆಕೆಗೆ ಗಂಡನ ಮೇಲೆ ಪ್ರೀತಿ ಇಲರ್ಿಲ್ಲ ಅಂತಲ್ಲ..ಆದ್ರೆ ಒಬ್ಬ ತಾಯಿಗೆ ತನ್ನ ಮಕ್ಕಳ ಜೊತೆಗಿನ ಅಟ್ಯಾಚ್ಮೆಂಟ್ ಬೇರೆ ಒಬ್ಬ ತಂದೆಗೆ ಬೇರೆ..!

    ಮಕ್ಕಳು ನಮ್ಮದೇ ಒಂದು ಪಾರ್ಟ್ ಆಗ್ಬಹುದು ಮಧು.. ಆದ್ರೆ ನಾವೇ ಆಗೋದಕ್ಕೆ ಸಾಧ್ಯ ಇಲ್ಲ..! ನನಗೆ ಅನ್ನಿಸಿದ ಹಾಗೆ ಗಂಡಾ ಹೆಂಡತಿಯ ಸಂಬಂಧದಲ್ಲಿ ಮಕ್ಕಳು ಮತ್ತಷ್ಟು ಸಂಭ್ರಮವನ್ನ ಕೊಡಬಹುದು, ಆದ್ರೆ ಅವರೇ ಸಂಬ್ರಮವಾದ್ರೆ, ಅವರಹೊರತಾಗಿ ಮತ್ಯಾವ ಕನಸೂ ಇಲ್ಲದಿದ್ರೆ, ಅವರಿಗಾಗೇ ಬದುಕ್ತೀವಿ ಅಂದ್ಕೊಂಡ್ರೆ , ಹೆಂಡತಿಯಾಗೋ ಗಂಡನಾಗೋ , ಅಥವಾ ನಾನಾಗೋ ಅಸ್ತಿತ್ವವೇ ಇರಲ್ಲಾ.. ಬರೀ ತಾಯಾಗಬಹುದು ತಂದೆಯಾಗಬಹುದು ಅಷ್ಟೆ.. ಮಕ್ಕಳೆಡೆಗಿನ ಪ್ರೀತಿಗಿಂತ ಜಾಸ್ತಿ ತನ್ನನ್ನೇ ಅರ್ಪಿಸಿಕೊಂಡು, ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾದ ಜೀವವನ್ನ ಪ್ರೀತಿಸೋದ್ರಲ್ಲಿ ತಪ್ಪಿದ್ಯಾ..?
    ಅಪ್ಕೋರ್ಸ್ ಪ್ರಿತಿ ಬದುಕಾಗಬೇಕು.. ಬದುಕನೀಡಬೇಕು ನಿಜ.. ಆದ್ರೆ ಎಲ್ಲರಿಗೂ ಅಷ್ಟು ಗಟ್ಟಿಮನಸಿರಲ್ಲಾ ಅಲ್ವಾ..? ತ್ಯಾಗಕ್ಕಿಂತ ದೊಡ್ಡ ಪ್ರೀತಿ ಇಲ್ಲ ಅಂತಾರೆ..ಅಂದ್ರೆ ಇದು ತ್ಯಾಗ ಅಲ್ವಾ..?

    ಹಾಗಂತ ಗಂಡನೋ ಅಥವಾ ಹೆಂಡತಿಯೋ ಸತ್ಹೋದ್ಲು ಅಂತ ಜೊತೆ ಜೊತೆಗೇ ಪ್ರಾಣ ಬಿಡೋದು ಪ್ರೀತಿ ಅಂತ ನಾನೂ ಹೇಳಲ್ಲಾ.. ಆದ್ರೆ ಅಪರಾಧಿಭಾವವಿದೆಯಲ್ಲ, ನನ್ನವಳನ್ನ ನನ್ನಿಂದ ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗ್ಲಿಲ್ವಲ್ಲ ಅನ್ನೋದು.. ಅದು ಅಷ್ಟು ಈಸಿಯಾಗಿ ನೋವಿನಿಂದ ಹೊರಬರೋದಕ್ಕೆ ಬಿಡಲ್ಲಾ.. ಇನ್ನು ಆ ಟೈಮಲ್ಲಿ ಅವನ ಜೊತೆಗೆ ಇನ್ಯಾರಾದರೂ ಇದ್ರೆ ಅಂಥದ್ದೊಂದು ಅವಘಡ ನಡೀತಾ ಇರ್ಲಿಲ್ವೇನೋ .. ಒಂಟಿತನ ಆಘಾತ ನೋವು ಇಷ್ಟು ಸಾಕು ಇಂಥದ್ದೊಂದು ನಿರ್ಧಾರಕ್ಕೆ ಬರೋದಕ್ಕೆ..

    ನಾನು ಈ ಕೇಸನ್ನ ಪವಿತ್ರ ಪ್ರೀತಿಗೆ ಉದಾಹರಣೆ ಅಂತಾನೇ ಅನ್ನೋದು.. ಅಂಥ ಅವಿನಾಬಾವ ಸಂಬಂಧಕ್ಕೆ ದೇವರು ಭರಿಸಲಾಗದ ಕಷ್ಟಗಳನ್ನ ಕೊಡಬಾರದಿತ್ತು ಅಂತ ನಂಗನ್ಸತ್ತೆ..

    ಇದರಲ್ಲಿ ತಪ್ಪಿದ್ಯಾ..? ಗುರು ಅವರೆ ನೀವು ಇದನ್ನ ಓದಿದ್ರೆ ಇದಕ್ಕೆ ಪ್ರತಿಕ್ರಯಿಸಿ.. ಯಾರೇ ಆದ್ರೂ ನನ್ನ ಈ ಯೋಚನೆಗಳಲ್ಲಿ ತಪ್ಪಿದ್ಯಾ..? ತಿಳಿಸಿ..

    ReplyDelete
  6. Thanks Vani...This story of their selfless love kept coming back to me even after so may days

    ReplyDelete
  7. Sorry for late reply

    nimma yochanegalalli tappillari

    i agree :)

    ReplyDelete