Friday, March 4, 2011

ಸಮ್ ಬಂಧ..!ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಹೀಗೆ ಬಂದಿಸಿಹುದೋ... ಎಷ್ಟು ಸುಂದರವಾದ ಸಾಲುಗಳು ಅಲ್ವಾ..? ಅದಕ್ಕೆ ಅಷ್ಟೇ ಚಂದದ ರಾಗ.. ಕಂಠ... ಕೆಲವು ಹಾಡುಗಳನ್ನ ಕೇಳಿದ್ರೆ ಕೇಳ್ತಾನೇ ಇರ್ಬೇಕು ಅನ್ಸತ್ತೆ.. ಮನಸು ಎಲ್ಲೆಲ್ಲಿಂದ ಎಲ್ಲಿಗೋ ತೇಲ್ ಹೋಗ್ಬಿಡತ್ತೆ.. ನಾನೂ ಅಷ್ಟೇ ಆ ಹಾಡ್ ಕೇಳ್ತಾ ಕೇಳ್ತಾ ಕಳದ್ಹೋದೆ.. ನನ್ನ ತಲೆಯಲ್ಲಿ ಅವಳಿದ್ಲು... ಕಡಲಿನಂತವಳು...ಒಡಲಿನಂತವಳು.. ಅವಳಂತವಳು ಅವಳು ಮಾತ್ರ.. ಆಕೆಯಷ್ಟು ಒಳ್ಳೆಯವಳು ಮತ್ತೊಬ್ಬರಿರೋ ಚಾನ್ಸೇ ಇಲ್ವೇನೋ ಅಂತ ನನಗನ್ಸತ್ತೆ.. ಯಾಕಂದ್ರೆ ನಾನು ಅವಳಂತ ಮತ್ತೊಂದು ಮನಸನ್ನ ನೋಡಿಲ್ಲಾ.. ಅದೆಷ್ಟೇ ಬಯಸಿದ್ರೂ ಅವಳಂತಾಗೋದಕ್ಕೆ ನನ್ನಿಂದಾಗಲ್ಲಾ..   ಶಿ ಈಸ್ ಸಿಂಪ್ಲಿ ಸುಪರ್ಬ್ .. ಅವಳ ಜೊತೆ ನನ್ನದು ಜನ್ಮ ಜನ್ಮದ ಅನುಬಂಧ.. ಮುಗಿಯದ ಸಂಬಂಧ.. ಯಾವತ್ತಿಗೂ ಬೇಸರವಾಗದ ಬಂಧ...
ಪ್ರತಿಯೊಬ್ಬರ ಬದುಕಲ್ಲೂ ಯಾರೋ ಒಬ್ಬರು ಹೀಗೆ ಜನ್ಮಜನ್ಮದ ಮೈತ್ರಿಯಂತವರಿದ್ರೆ ಬದುಕು ನಿಜಕ್ಕೂ ಸುಂದರವಾಗಿರತ್ತೆ. ಆದ್ರೆ ಎಲ್ರೂ ನನ್ನಷ್ಟು ಅದೃಷ್ಟವಂತರಿರಲ್ಲಾ..! ಪ್ರತಿಯೊಬ್ಬರೂ ಬೆಳ್ಳಿಯ ಸ್ಪೂನನ್ನ ಬಾಯಲ್ಲಿಟ್ಕೊಂಡು ಹುಟ್ಟೋದಕ್ಕಾಗಲ್ಲಾ.. ಆದ್ರೆ ಬದುಕಿನ ಯಾನದಲ್ಲಿ ಬಯಸಿದ್ದು ಬಯಸಿದಾಗ ಸಿಗೋ ಸೌಭಾಗ್ಯ ಕೆಲವರಿಗಿರತ್ತೆ.. ಇನ್ಕೆಲವರಿಗೆ ಸಿಕ್ಕಿದ್ದೆಲ್ಲಾ ಭಾಗ್ಯ ಅನ್ನೋ ಥರದ ಮಧುರ ಮನಸಿರತ್ತೆ.. ಅಷ್ಟೊಂದು ಹ್ಯಾಪಿ ಹೃದಯ ನಂದಲ್ಲಪ್ಪಾ.... ಎಲ್ಲವನ್ನೂ ಇಷ್ಟಾಪಡಲ್ಲಾ..ಎಲ್ಲರನ್ನೂ ಹತ್ತಿರಬಿಟ್ಕೊಳ್ಳೋದೂ ಇಲ್ಲಾ.. ಒಮ್ಮೆ  ಸನಿಹ ಬಂದವರು ಕಡೆತನಕ ಜೊತೆಗೆ ನಿಲ್ಲಬೇಕು ಅಂತ ಬಯಸೋದೂ ಇಲ್ಲಾ.. ಜೊತೆಗಿದ್ದಿದ್ದಕ್ಕೆ ಅಂತಾ ಪರಿ ಥ್ಯಾಂಕ್ಪುಲ್ ಆಗಿರೋದಕ್ಕೂ ನನಗೆ ಬರಲ್ಲಾ..ಅಷ್ಟಕ್ಕೂ ತೀರಾ ಜ್ನಮ ಜನ್ಮದ ಮೈತ್ರಿ ಅನ್ನೋ ಮಟ್ಟದ ಸಂಬಂಧ ಎಲ್ಲರ ಜೊತೆಗೂ ಬೆಸೆಯೋವಂಥದ್ದಲ್ಲಾ ಅಲ್ವಾ..?
 ಈ ಮೈತ್ರಿ ಅನ್ನೋದು ಎಷ್ಟು ವಿಚಿತ್ರ ಅಲ್ವಾ..? ಚಿಕ್ಕವರಿರೋವಾಗ ಜೊತೆಗೆ ಆಡೋ ಜನರಜೊತೆಗೆ ಒಂದು ರೀತಿಯ ಮೈತ್ರಿ.. ಸ್ವಲ್ಪ ಹೈಸ್ಕೂಲ್ ಮಟ್ಟಕ್ಕೆ ಬಂದಾಗ ಶುರುವಾಗೋ ಸ್ನೇಹಸೇತುವಿನಲ್ಲೊಂದು ಮೈತ್ರಿ.. ಗುರು ಶಿಶ್ಯರಲ್ಲೂ ಅರಿಯದ ಮೈತ್ರಿ.. ಟೀನೇಜಿನಲ್ಲಿ ತರಾವರಿ ಮೈತ್ರಿ.. ಅದರಲ್ಲಿಷ್ಟು ಪವಿತ್ರ ಮೈತ್ರಿ ಮೈ ಮರೆತರೆ ಅಪವಿತ್ರ ಮೈತ್ರಿ.. ಎಲ್ಲದಕ್ಕೂ ಮಿಗಿಲಾಗಿ ಬದುಕಿನುದ್ದಕ್ಕೂ ಜೊತೆಯಾಗೋದು ಜನುಮ ಜನುಮದ ಮೈತ್ರಿ... ಅಂಥದ್ದೊಂದು ಬಾವ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸೇರಿ ಬದುಕಿನುದ್ದಕ್ಕೂ ಜೊತೆಯಾಗಿ ನಡೆಯೋ ಸಂಕಲ್ಪ ಮಾಡಿದ  ಗಂಡಾ ಹೆಂಡಿರ ನಡುವೆ ಸದಾ ಜೀವಂತವಾಗಿದ್ರೆ ಅವರಷ್ಟು ಸುಖಿ ಇನ್ನೊಬ್ಬರಿಲ್ಲಾ..
ಮದುವೆ ಅನ್ನೋದು ಸ್ವರ್ಗದಲ್ಲೇ ನಿರ್ಧಾರವಾಗಿರತ್ತೆ..ಅದು ಜನ್ಮ ಜನ್ಮದ ಸಂಬಂಧ ಅಂತ ಹಿರಿಯರು ಹೇಳ್ತಾರೆ.. ಅದರಲ್ಲಿ ನಿಜಾ ಇದ್ಯಾ? ಸೈನ್ಸು ಒಪ್ಕೊಳ್ಳೋದ್ ಹಾಗಿರ್ಲಿ ಜ್ಯೋತಿಶ್ಯಾಸ್ತ್ರಾ ಆದ್ರೂ ಅದಕ್ಕೆ ಒತ್ತುಕೊಡತ್ತಾ..? ಆ ಯೋಚನೆ ನಂಗೆ ಸಾಕಷ್ಟು ಬಾರಿ ಬಂದಿದೆ.. ಕೆಲವರತ್ರಾ ಕೇಳಿದೀನಿ ಕೂಡಾ.. ಆದ್ರೆ ನಾನು ಕೇಳಲ್ಪಟ್ಟ ಪ್ರಕಾರ ಜನ್ಮಗಳಿವೆ ಆದ್ರೆ ಪ್ರತಿಯೊಂದು ಜನ್ಮಕ್ಕೂ ಜೊತೆಗಾರ ಅಥವಾ ಜೊತೆಗಾತಿ ಒಬ್ರೇ ಇರ್ತಾರೆ ಅನ್ನೋ ನಂಬಿಕೆ ಮಾತ್ರ ಇಲ್ಲಾ.. ಒಂದ್ವೇಳೆ ಯಾವುದೋ ಜೋಡಿ ಅಷ್ಟು ತೀವ್ರವಾಗಿ ಪ್ರೀತಿಸಿ, ಜನ್ಮಜನ್ಮಕ್ಕೂ ಜೊತೆಯಾಗ್ತೀವಿ ಅಂತ ಬಲವಾಗಿ ನಂಬಿದ್ರೆ ಜೊತೆಗೇ ಇರ್ತಾರೇನೋ.. ಅಂಥವರು ಇದ್ದಾರಾ ? ಅನ್ನೋದನ್ನ ಪುನರ್ಜನ್ಮ ಕಾರ್ಯಕ್ರಮ ಮಾಡ್ತಾರಲ್ಲಾ ಅವರನ್ನ ಕೇಳ್ಬೇಕು.. !
ಮೇಲ್ನೋಟಕ್ಕಂತೂ ಈ ಮದುವೆ , ಗಂಡಾ ಹೆಂಡತಿಯ ಸಂಬಂಧ ಇದೆಲ್ಲಾ ಅರ್ಥ ಕಳ್ಕೊಂಬಿಟ್ಟಿದೆ.. ಎರಡು ದೇಹ ಒಂದು ಜೀವ ಅನ್ನೋ ಥರಾ ಬದುಕೋ ದಂಪತಿ ಇವತ್ತಿಗೆ ಸಿಗೋದೇ ಇಲ್ಲಾ.. ಆದ್ರೂ ಜೊತೆಗಿರ್ತಾರೆ.. ವಿಚ್ಛೇಧನ ಪ್ರಕರಣಗಳು ಇರೋದ್ರಲ್ಲಿ ನಮ್ಮ ನಡುವೆ ಸ್ವಲ್ಪ ಕಡಿಮೆನೇ ಇದೆ.. ಹಂಗಂತ ಜೊತೆಗೆ ನಡೆಯೋರಲ್ಲಿ ಹಿತ ಇದೆಯಾ..? ಆ ಸಂಬ0ಧಗಳಲ್ಲಿ ಸವಿ ಇದೆಯಾ..? ಉಹು.. ಇವತ್ತು ಹುಡುಕ್ಕೊಂಡ್ಹೋದ್ರೂ ಆದರ್ಷ ಅನ್ನಿಸೋ ಥರದ ದಂಪತಿ ಸಿಗೋದು ತುಂಬಾನೇ ಕಷ್ಟ.. ಎಲ್ಲೋ ನೂರಕ್ಕೊಂದು ಜೋಡಿ ಮೇಡ್ ಪಾರ್ ಈಚ್ ಅದರ್ ಅನ್ನಿಸಿದ್ರೆ ಹೆಚ್ಚು...

ಅಂದ್ಹಾಗೆ ಬೇರೆಯವರಿಗೆ ಅವರಂತಿರ್ಬೇಕು ಅನ್ಸೋದ್ ಬೇರೆ.. ಅವರಿಗೆ ಅವರ ಬದುಕಿನ ಬಗ್ಗೆ ಖುಶಿ ಇರೋದ್ಬೇರೆ.. ಒಂದಿಷ್ಟು ಜನ ಮಾತಲ್ಲೇ ಮರಳುಮಾಡ್ತಾರೆ, ಆದ್ರೆ ಮನಸಲ್ಲೇ ಮಂಡಿಗೆ ತಿಂತಾರೆ..ತೋರಿಕೆಯ ಬದುಕು ಶಾಶ್ವತ ಅಲ್ಲಾ.. ಒಂದಲ್ಲಾ ಒಂದು ದಿನ ಮುಖವಾಡ ಕಳಚಿ ಬೀಳತ್ತೆ.. ಬಿದ್ದಾಗ ಏಳೋದಕ್ಕಾಗಲ್ಲಾ.. ಎದ್ದರೂ ಬದುಕೋದಕ್ಕಾಗಲ್ಲಾ.. ಆದಷ್ಟು ನಮ್ಮ ಬದುಕು ನಮಗಾದ್ರೂ ಪಾರದರ್ಷಕವಾಗಿರ್ಬೇಕು.. ಪಾರಮಾಷರ್ಿಕವಾಗಿರ್ಬೇಕು.. ಮೈತ್ರಿ ಮುಂದಿನ ಮಾತು.. ಇನ್ನು ಜನ್ಮದ್ದಂತೂ ದುರ ದೂರ.. ಜರಿಯ ನೊರೆಗೆ ಹರಿವ ತೊರೆಗೆ ಬಾವ ಜೀವ ಬಂಧ.. ಬದುಕ ಪುಟದಿ ಮನದ ತಟದಿ ಬಯಕೆ ಬೆಳಕ ಗಂಧ.. ನನಗೆ ನೀನೇ ಚಂದ.. ನಿನ್ನೊಲುಮೆಯೇ ಅಂದ.. ಅದು ಬಂಧವಲ್ಲ ಸಂ ಬಂಧ.. ಅನುಬಂಧ..

2 comments:

  1. ಪ್ರೀತಿಸೋ ಮನಸಿರೋರಿಗೆ ಪವಿತ್ರ ಪ್ರೀತಿ ಸಿಕ್ಕೇ ಸಿಗತ್ತೆ ಆಶ್..:))

    ReplyDelete